Monday, August 27, 2012

भयम्


तावद् भयेषु भेतव्यं यावद् भयमनागतम् ।
आगतं तु भयं दृष्ट्वा प्रहर्तव्यम् अशङ्कया ॥
             -चाणक्यः
ತಾವದ್ ಭಯೆಷು ಭೇತವ್ಯಂ ಯಾವದ್ ಭಯಮನಾಗತಮ್ |
ಆಗತಂ ತು ಭಯಂ ದೃಷ್ಟ್ವಾ ಪ್ರಹರ್ತವ್ಯಮ್ ಅಶಂಕಯಾ ||
                  -ಚಾಣಕ್ಯ
ಬರಬಹುದಾದ ಭಯವು ಬರುವ ತನಕ ಭಯಪಡಬೇಕು.
ಅದೇ ಭಯವು ಎದುರಾದಾಗ ನಿರ್ಭಯವಾಗಿ ಎದುರಿಸಬೇಕು.

ಬರಬಹುದಾದ ಭಯಕ್ಕೆ ಹೆದರುವುದು ಒಳ್ಳೆಯದು. 
ಇದರಿಂದ ಅದನ್ನು ಎದುರಿಸಲು ಸೂಕ್ತವಾದ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಲು ಅನುಕೂಲವಾಗುವುದು. 
ಆದರೆ ಭಯವು ಬಂದಾಗ ಮಾತ್ರ ಹೆದರುವುದಕ್ಕಿಂತ ಸಮರ್ಥವಾಗಿ ಎದುರಿಸುವುದೇ
ಯೋಗ್ಯವಾದ ಮಾರ್ಗ. ಏಕೆಂದರೆ ಎದುರಾದ ಭಯವು ಮನುಷ್ಯನನ್ನು ಕಂಗಾಲಾಗಿಸುತ್ತದೆ.

ಉದಾಹರಣೆಗೆ, ಒಬ್ಬ ಮನುಷ್ಯನಿಗೆ ಹಾವು ಕಚ್ಚಿತೆಂದಿಟ್ಟುಕೊಳ್ಳಿ. ಆತ ಹಾವಿನ ವಿಷದಿಂದ ಅರ್ಧ ಸಾಯುತ್ತಾನೆ,
ಇನ್ನರ್ಧ ಹಾವಿನ ಭಯದಿಂದ. ಹೀಗೆ ಭಯವು ಮನುಷ್ಯನನ್ನು ನಾಶಮಾಡಲು ವಿಷದಷ್ಟೇ ಸಮರ್ಥವಾಗಿದೆ.
ವಿಷವು ದೇಹವನ್ನು ದುರ್ಬಲಗೊಳಿಸಿದರೆ, ಭಯವು ಮನಸ್ಸನ್ನು ದುರ್ಬಲಗೊಳಿಸುತ್ತದೆ.

1 comment: